ಅರುವತ್ತಮೂರು ಪುರಾತನರು : ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿ
ರುವ ಶರಣರು, ಕನ್ನ ಡ ವಚನಕಾರರು ಇವರನ್ನು ಪುರಾತನರು, ಪ್ರಮಥರು ಎಂದೂ
ತಮಿಳರು ನಾಯನಾರ್ ಎಂದೂ ಕರೆಯುವರು. ತಮಿಳುನಾಡಿನ ಶಿವದೇವಾಲಯಗಳಲ್ಲೂ
ಕರ್ನಾಟಕದಲ್ಲಿ ನಂಜನಗೂಡು, ಚಾಮರಾಜನಗರದ ದೇವಾಲಯಗಳಲ್ಲೂ ಈ ಭಕ್ತರ
ವಿಗ್ರಹಗಳಿವೆ. ಇವರಲ್ಲಿ ಮೂವರು ತೇವಾರ ಎಂಬ ತಮಿಳು ವೇದ ಬರೆದು ಪ್ರಸಿದ್ಧರಾಗಿದ್ದಾರೆ.
ತಮಿಳು, ಕನ್ನ ಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಇವರನ್ನು ಕುರಿತು ಹಲವಾರು
ಮಂದಿ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಹಂಪೆಯ ಹರೀಶ್ವರ, ಸುರಂಗಕವಿ,
ವೀರಭದ್ರ ಚತುರ್ಮುಖ ಬೊಮ್ಮರಸ, ನಿಜಗುಣಶಿವಯೋಗಿ, ಬಸವಪ್ಪಶಾಸ್ತ್ರೀ−ಇವರು
ಈ ಪುರಾತನರನ್ನುಕುರಿತು ಕಾವ್ಯಗಳನ್ನು ಬರೆದಿದ್ದಾರೆ. ಬಸವಪುರಾಣಾದಿ ಗ್ರಂಥಗಳಲ್ಲೂ
ಇವರ ಉಲ್ಲೇಖವಿದೆ. ಇವರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು,
5 ಮಂದಿ ವೈಶ್ಯರು, ಒಬ್ಬ ಪಂಚಮ, 24 ಮಂದಿ ಶೂದರು ಇಬ್ಬರು ಸ್ತ್ರೀಯರಾದಿಯಾಗಿ
ಎಲ್ಲ ಕುಲ ಜಾತಿ ಪಂಥದವರೂ ಇದ್ದಾರಂದೂ ಇವರ ಕಾಲ ಪಸಕ್ತಶಕದ ಆರಂಭದಿಂದ
10ನೆಯ ಶತಮಾನದವರೆಗೆ ಹೋಗುತ್ತದೆಂದೂ ವಿದ್ವಾಂಸರ ಅಭಿಪ್ರಾಯ. ಇವgನ್ನು
ಕುರಿತು ತಮಿಳಿನಲ್ಲಿ ಪೆರಿಯಪುರಾಣವನ್ನು ಬರೆದ ಕವಿಯ ಹೆಸರು ಶೆಕ್ಕಿರಾರ್, ಈ
ಗ್ರಂಥವನ್ನು ಚಿದಂಬರಂ ಕ್ಷೇತ್ರದಲ್ಲಿ ಬರೆದಂತೆ ಪ್ರತೀತಿಯಿದೆ. 63 ಹೆಸರುಗಳು ಈ
ರೀತಿ ಇವೆ:
 ಅ.ಕ್ರ  ಪೆರಿಯಪುರಾಣದ ಪ್ರಕಾರ  ಪೆರಿಯಪುರಾಣದ ಪ್ರಕಾರ೧ ತಿರುನೀಲಕಂಟ 				ತಿರುನೀಲಕಂಠ ೨ ಇಯರ್‍ಪಗೈ ಯರ್			ಇಹಪ್ಪಗೆಯಾಂಡ ೩ ಇಳೆಯಾನ್ ಕುಡಿಮರ			ಇಳೆಯಾಂಡಗುಡಿಮಾರ೪ ಮೆಯ್‍ಪ್ಪೊರುಳರ್			ಸೇದಿರಾಜ೫ ವಿರನ್‍ಮಿಂಡರ್				ಮೆರೆಮಿಂಡ೬ ಅಮರನೀತಿ				ಅಮರನೀತಿ೭ ಎರಿಪತ್ತರ್				ಇರಿಭಕ್ತ೮ ಏಣಾದಿನಾಥರ್				ಏಣಾಧಿನಾಥ೯ ಕಣ್ಣಪ್ಪ					ಕಣ್ಣಪ್ಪ೧೦ ಕುಂಗುಲಿಯಕ್ಕಲಿಯರ್			ಕೊಂಗುಲಿಯ ಕಲಿಯರು೧೧ ಮಾನಕ್ಕಂಜಾರರ್				ಮಾನಕಂಜರ೧೨ ಅರಿವಾಳ್ತಾಯರ್				ಅರಿವಾಳ್ತಾಂಡ (ಅರಿವಾಟ್ಟಾಯರ್)೧೩ ಆನಾಯರ್				ಅನಾಯನಾರ೧೪ ಮೂರ್ತಿನಾಯನಾರ್			ಒಲಘಾಂಡಮೂರ್ತಿ೧೫  ಮುರುಗರ್				ನಮಶ್ಶಿವಾಯ ಮುರುಘರು೧೬ ರುದ್ರಪಶುಪತಿ				ರುದ್ರಪಶುಪತಿ೧೭ ತಿರುನಾಳೈಪ್ಪೋವರ್			ತಿರುನಾಳ್ಪೋವರು೧೮ ತಿರುಕುರುಪ್ಪು ತೊಂಡರ್			ತಿರುಕುರುಂಪೆತೊಂಡ೧೯ ಕಂಡೇಶ್ವರರ್				ಚಂಡೇಶ೨೦ ತಿರುನಾವುಕ್ಕರಸರ್ (ಅಪ್ಪಾರ್)		ವಾಗೀಶ೨೧ ಕುಲಚ್ಚಿರೈಯಾರ್				ಕುಲಚೆರೆಯ೨೨ ಪೆರುಮಿಳಲೈಕ್ಕುರುಂಬರ್			ಪೆರುಮಳಿಲೆಯ ಕುರುಂಬರು೨೩ ಕಾರೈಕ್ಕಾಲ್ ಅಮ್ಮೆಯರ್			ಕಾರಿಕಾಲಮ್ಮೆ೨೪ ಅಪ್ಪೊದಿಯಡಿಗಳ್			ಅಃಪೂತಿ ಅಡಿಗಳು೨೫ ತಿರುನೀಲನಕ್ಕ ರ್				ತಿರುನೀಲನಕ್ಕರು೨೬ ನಮಿನಂದಿಯಡಿಗಳ್			ನಮಿನಂದಿಯಡಿಗಳು೨೭ ತಿರುಞಆನಸಂಬಂಧರ್			ತಿರುಜ್ಞಾನಸಂಬಂಧರು೨೮ ಏಯರ್‍ಕೋನ್-ಕಲಿಕ್ಕಾಮರ್			ಕಲಿಕಾಮ೨೯ ತಿರುಮೂಲರ್				ತಿರುಮೂಲರು೩೦ ತಂಡಿಯಡಿಗಳ್				ದಂಡೀಶ			೩೧ ಮೂಕ್ರ್ಕನಾಯನಾರ್			ಅಚ್ಯುತ೩೨ ಸೋಮಾಸಿಮರರ್			ಸೋಮಾಸಿಮಾರ೩೩ ಸಾಕ್ಕಿಯನಾಯನಾರ್			ಸಾಂಖ್ಯತೊಂಡ೩೪ ಶಿರುಪ್ಪುಲಿನಾಯನಾರ್			ಚಿರುಪ್ಪುಲಿಯಾಂಡ೩೫ ಶಿರುತ್ತೊಂಡರ್				ಚಿರುತೊಂಡ೩೬ ಸೇರ್‍ಮಾನ್ ಪೆರುಮಾಳ್			ಚೇರಮ೩೭ ಕಣನಾದರ್				ಗಣನಾಥ೩೮ ಕುರುವನಾಯನಾರ್			ವೇಳೂತ೩೯ ಪುಗಳ್‍ಚೋಳರ್				ಪಗಲ್ಚೋಳ೪೦ ನರಸಿಂಗಮುನೈಯಾರೈಯಾರ್		ನರಸಿಂಗ ಮೊನೆಯರು೪೧ ಆದಿಬತನಾಯನರ್			ಅತಿಭಕ್ತ೪೨ ಕಲಿಕ್ಕಂಬರ್				ಕಲಿಕಂಬ೪೩ ಕಲಿಯನಾಯನಾರ್			ಕಲಿಯನಾಯನಾರ೪೪ ಸತ್ತಿನಾಯನಾರ್				ಕಲಿಚೆತ್ತಿಯಾಂಡರು೪೫ ಐಯಡಿಗಳ್ ಕಾಡವರ್‍ಕೋನ್		ಅಯ್ಯಡಿ೪೬ ಕಣಂಬುಲ್ಲನಾಯನಾರ್			ಕಣಂಬುಲ್ಲನಂಬಿ೪೭ ಕಾರಿನಯನಾರ್				ಕಡವೂರಕಾರಿ೪೮ ನೆಡುಮಾರನಾಯನಾರ್			ಸೌಂದರಪಾಂಡ್ಯರಾಜ (ಕೂನಪಾಂಡ್ಯ)೪೯ ವಾಯಿಲಾರ್ ನಾಯನಾರ್			ವಾಹಿಲ್ಯ೫೦ ಮುನೈಯಡುವರ್			ಮೊನೆಯಿಡುವರು೫೧ ಕಳರ್ಚಿಂಗರ್				ಕಳಚೆಂಗರು೫೨ ಇಡಂಗಳಿಯಾರ್				ಎಡಗಳೆಯರು೫೩ ಸೆರುತುಣೈಯಾರ್			ಚಿರುತ್ತೊಣೆಯಾಂಡ೫೪ ಪುಗಳ್ ತುಣೈನಾಯನಾರ್			ಪಗಲ್ತೊಣೆಯಾಂಡರು (ಎಡಗೆಳೆಯ)೫೫ ಕೋಟ್ಟುಲಿನಾಯನಾರ್			ಕೊಲ್ಬುಲಿಯಾಂಡ೫೬ ಪೂಸಲಾರ್				ಪೂಸಲೆಯಾಂಡ೫೭ ಮುಂಗೈಯಕ್ರ್ಕರಸಿಯಾರ್			ಪಾಂಡ್ಯ ಮಹಾದೇವಿ೫೮ ನೇಶನಯನಾರ್				ನೇಶರ್೫೯ ಕೋಚ್ಚಂಗಣ್‍ಚೋಳರ್			ಕಲಚೆಂಗ ಪೆರುಮಾಳ್೬೦ ತಿರುನೀಲಕಂಟಯಾಳ್ಪಾಣರ್			ತಿರುನೀಲಕಂಠಪಾಣರು೬೧ ಶಡೈಯನಾಯನಾರ್			ಜಡೆಯನಾಯನಾರ್೬೨ ಇಸೈಞಆನಿಯಾರ್			ಯಸ್ಯಜ್ಞಾನಿದೇವಿಯರು೬೩ ಸುಂದರಮೂರ್ತಿ				ನಂಬಿಯಣ್ಣ

ಇವರನ್ನು ಕುರಿತ ಮಂಟಪಪೂಜೆ ವೀರಶೈವರಲ್ಲಿ ಬಳಕೆಯಲ್ಲಿದೆ. ಧಾರವಾಡದ
ಮುರುಘಾಮಠದಲ್ಲಿ 63 ಹೆಸರಿನ ಕೋಣೆಗಳಿವೆ. ಬೆಳಗಾಂವಿ ಜಿಲೆಯ ಅಥಣಿಯಲ್ಲಿ
ಶ್ರೀ ಮುರುಘೇಂದ್ರ ಶಿವಯೋಗಿಗಳು 63 ಮಂಟಪಗಳ ಸ್ಥಾಪನೆ ಮಾಡಿದ್ದಾರೆ. (ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ